ಬಹಳ ದಿನಗಳಿಂದ, ಭಗವದ್ಗೀತೆಯ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ನಿನ್ನೆ ಅದಕ್ಕಾಗಿ ಒಂದು ಹೊಸ ಬ್ಲಾಗ್ ರಚಿಸಿದೆ. ಇದರಲ್ಲಿ ದಿನಕ್ಕೊಂದು ಭಗವದ್ಗೀತೆಯ ಶ್ಲೋಕವನ್ನು ಅನುವಾದ ಹಾಗೂ ಭಾವಾರ್ಥ ಸಮೇತವಾಗಿ ಬರೆಯ ಬೇಕೆಂದುಕೊಂಡಿದ್ದೇನೆ. ಅನುವಾದ ಹಾಗೂ ಭಾವಾರ್ಥವು ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಲಭ್ಯವಿರುತ್ತದೆ. ಇ-ಮೈಲ್ನ ಮೂಲಕವೂ ಈ ಶ್ಲೋಕಗಳನ್ನು ಪಡೆಯುವ ಸೌಲಭ್ಯವು ಈ ಬ್ಲಾಗ್ನಲ್ಲಿದೆ. ಭಗವದ್ಗೀತೆಯ ಸಂದೇಶವನ್ನು ಎಲ್ಲರಿಗೂ ತಿಳಿಸುವಲ್ಲಿ ಇದು ನನ್ನ ಕಿಂಚಿತ್ ಪ್ರಯತ್ನ. ಬ್ಲಾಗ್ನ ವಿಳಾಸ ಈ ಕೆಳಗಿನಂತಿದೆ.
http://bhagavadgitaquotes.blogspot.com/
Thursday, October 09, 2008
ದಿನಕ್ಕೊಂದು ಭಗವದ್ಗೀತೆಯ ಶ್ಲೋಕ
Labels:
ಭಗವದ್ಗೀತೆ
Tuesday, September 30, 2008
ಧೂಮಪಾನ ನಿಷೇಧ
ಕೇಳಿದರಾ ಹೊಸ ಕಾನೂನಾ
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ
ಸ್ವಲ್ಪ ದಿನದಲ್ಲೇ ಅದಾಗುತ್ತದೆ ಊನ
ಅಲ್ಲಿವರೆಗೆ ಕದ್ದುಮುಚ್ಚಿಯೇ ನೀ ಸೇದಾ !
Labels:
ನನ್ನ ಹನಿಗವನಗಳು
Saturday, June 28, 2008
ಸಿರಿಗನ್ನಡಂ ಗೆಲ್ಗೆ
ಹೋಗ್ತಿದೆ ಬೆಂಗಳೂರು ಎಲ್ಲಿಗೆ
ಎಲ್ಲೆಲ್ಲೂ ಪರವೂರವರ ಏಳಿಗೆ
ನಡೆಯೋದೆಲ್ಲಾ ಅವರದ್ದೇ ಹೇಳಿಕೆ
ನಾವು ಹೆಚ್ಚಿಸಿದ್ರೆ ಮಾತ್ರ ಕನ್ನಡದ ಬಳಕೆ
ನಿಜವಾಗ್ಲೂ ಸಿರಿಗನ್ನಡಂ ಗೆಲ್ಗೆ
Labels:
ನನ್ನ ಹನಿಗವನಗಳು
Monday, June 23, 2008
ಹಣದುಬ್ಬರ
ಸರಕಾರದ ಹೇಳಿಕೆ ಇಲ್ಲ
ನಮಗೆ ಹಣದುಬ್ಬರದ ಮೇಲೆ ಹಿಡಿತ
ಇವಳೂ ಅಂತಾಳೆ ನಲ್ಲಾ
ತಿಂಗಳ ಸಾಮಾನು ನೀನೂ ಹಿಡಿಯಲ್ಲೇ ತಾ
Labels:
ನನ್ನ ಹನಿಗವನಗಳು
Subscribe to:
Posts (Atom)
