Saturday, May 10, 2008

ಮೋಝಿಲ್ಲಾ ಫೈರ್ ಫಾಕ್ಸ್ ೩ ( Mozilla Firefox Beta 3 )

ಮೋಝಿಲ್ಲಾ ಫೈರ್ ಫಾಕ್ಸ್ (Mozilla Firefox) ಅನ್ನು ಯಾರು ತಾನೇ ಕೇಳಿಲ್ಲ. ಇದರ ವೇಗ ಹಾಗೂ ಇನ್ನಿತರ ವೈಶಿಷ್ಟ್ಯಗಳಿಂದಾಗಿ ಇದು ಬಹು ಬೇಗನೆ ಜನಪ್ರಿಯವಾಯಿತು. ಇದೀಗ ಈ ತಂತ್ರಾಂಶವು ಮೂರನೇ ಆವೃತ್ತಿಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಸಧ್ಯಕ್ಕೆ ಇದು ಬೀಟಾ (Beta 5) ಹಂತದಲ್ಲಿದೆ. ಕಳೆದ ಒಂದು ತಿಂಗಳಿಂದ ನಾನು ಇದನ್ನು ಬಳಸುತ್ತಿದ್ದೇನೆ ಹಾಗೂ ಇನ್ಮುಂದೆ Internet Explorer ಬಳಸುವ ಮಾತೇ ಇಲ್ಲ.

ನೀವೇನಾದರೂ ಫೈರ್ ಫಾಕ್ಸ್ ನ ಹಿಂದಿನ ಆವೃತ್ತಿಯನ್ನು ಬಳಸುತ್ತಿದ್ದರೆ, ಈ ಆವೃತ್ತಿಯಲ್ಲಿನ ವೈಶಿಷ್ಟ್ಯಗಳನ್ನು ಸುಲಭವಾಗಿ ಗಮನಿಸುತ್ತೀರಿ. ಇನ್ನೂ ಬಳಸಿಲ್ಲವಾದರೆ, ಈಗಲೇ ಇಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಿ.



No comments: